ರೇವತಿ ನಕ್ಷತ್ರದಂದು ಭೂವರಹನಾಥಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆಭೂವರಹನಾಥಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನ ಹಾಲು, ಐನೂರು ಲೀಟರ್ ಎಳನೀರು, ಜೇನುತುಪ್ಪ, ಮೊಸರು, ಹಸುವಿನ ತುಪ್ಪ, ಸುಗಂದ ದ್ರವ್ಯಗಳು, ಅರಿಶಿನ, ಶ್ರೀಗಂಧ ಸೇರಿದಂತೆ ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು, ಧವನ, ಗುಲಾಬಿ, ಕಮಲ ಸೇರಿದಂತೆ 58 ಬಗೆಯ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ನಡೆಸಲಾಗಿದೆ.