ಮೂರು ದಿನಗಳ ಉತ್ಸವ; ಇನ್ನೂರಕ್ಕೂ ಹೆಚ್ಚು ಕಲಾವಿದರ ಅಪೂರ್ವ ಸಂಗಮಶ್ರೀರಾಮಚಂದ್ರ ಮೂರ್ತಿ ವಿಷ್ಣು ಭಟ್ಲಾರ ಅಭೂತಪೂರ್ವ ಸಂಗೀತ ಕಚೇರಿ, ವಿದ್ವಾನ್ ಜಯಂತ್ ಮತ್ತು ವಿದುಷಿ ಶರ್ವಾಣಿ, ಅವರ ಗಾಯನ, ಮತ್ತು ಹಿರಿಯ ಸಂಗೀತ ವಿದುಷಿಯರಾದ ವಿನಯ ರಾವ್ ಮತ್ತು ಅವರ ಸಂಗಡಿಗರು, ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜಸ್ವಾಮಿಯವರ ಕೃತಿ ಮತ್ತು ದೇವರನಾಮಗಳ ಗಾಯನವನ್ನು, ಸುಮಾರು ನಾಲ್ಕು ಗಂಟೆಗಳಿಗಿಂತ ಹೆಚ್ಚಾಗಿ ನಡೆಸಿಕೊಟ್ಟರು.