ಸರ್ಕಾರ ಗ್ರಾಪಂ ನೌಕರರನ್ನು ಕಡೆಗಣಿಸುತ್ತಿದೆ: ಎಂ.ಬಿ. ನಾಡಗೌಡಸರ್ಕಾರ ಗ್ರಾಪಂ ಖಾಸಗೀಕರಣಕ್ಕೆ ಮುಂದಾಗಿದೆ. ಅದರ ಭಾಗವಾಗಿ ಕಡಿಮೆ ವೇತನ ನೀಡಿ ಜಲಸಖಿಯರನ್ನು ನೇಮಿಸಿಕೊಂಡು ವಾಟರ್ ಮ್ಯಾನ್ ಗಳನ್ನು ತೆಗೆಯುವ ಕೆಲಸ ಆರಂಭವಾಗುತ್ತಿದೆ. ಹಾಗೆಯೇ ಕರವಸೂಲಿಗಾರರು, ಕಂಪ್ಯೂಟರ್ ಆಪರೇಟರ್ ಗಳನ್ನು ಕೆಲಸದಿಂದ ತೆಗೆದು, ತಮಿಳುನಾಡು ಮಾದರಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಹೊರಟಿದೆ.