ನಾಳೆ ರಾಜ್ಯಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆರಾಜ್ಯ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ, ಸಂಸದೀಯ ವ್ಯವಹಾರಗಳು, ಶಾಸಕ ರಚನೆ ಇಲಾಖೆ ಹಾಗೂ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ನ.14ರಂದು ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್. ಹೇಮಂತ್ ಹೇಳಿದರು.