ವಾಕಿಂಗ್ ಪಾತ್ ಕಳಪೆ ಕಾಮಗಾರಿ: ಕ್ರಮಕ್ಕೆ ಆಗ್ರಹ ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಕೆಲ ಬಡಾವಣೆಗಳ ರಸ್ತೆಗಳ ಪಕ್ಕದಲ್ಲಿ ವಾಕಿಂಗ್ ಪಾತ್ ನಿರ್ಮಿಸಲು ಕಳಪೆ ಇಂಟರ್‌ಲಾಕ್ ಬ್ರಿಕ್ಸ್ ಅಳವಡಿಸಲಾಗಿದ್ದು, ಇದರಿಂದಾಗಿ ಬ್ರಿಕ್ಸ್‌ಗಳು ಕಿತ್ತು ಹೋಗುತ್ತಿವೆ. ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ನಗರಸಭೆ, ಇಂಜಿನಿಯರಿಂಗ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.