ವಿದ್ಯಾರ್ಥಿಗಳೇ ಮತದಾನ ಪಾವಿತ್ರ್ಯತೆ ಕಾಪಾಡಿ: ನ್ಯಾ. ವಿ. ಪುಷ್ಪವತಿಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದಿದ್ದು, ಅದನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚಲಾಯಿಸುವ ಮೂಲಕ ಮತದಾನದ ಮೌಲ್ಯ ಮತ್ತು ಮಹತ್ವ ಕಾಪಾಡಬೇಕೆಂದು ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿ. ಪುಷ್ಪವತಿ ತಿಳಿಸಿದರು.