ಹಿಂದುತ್ವ ನಮ್ಮ ಅಜೆಂಡಾ, ಅಭಿವೃದ್ಧಿ ನಮ್ಮ ಮಂತ್ರ: ಕೋಟಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯನಾಗಿ, 4 ಬಾರಿ ವಿಧಾನ ಪರಿಷತ್ ಸದಸ್ಯ, 3 ಬಾರಿ ಸಚಿವ, 2 ಬಾರಿ ವಿಪಕ್ಷ ನಾಯಕ, ಪಕ್ಷದಲ್ಲಿ ಜಿಲ್ಲೆ, ರಾಜ್ಯ ಪದಾಧಿಕಾರಿಯಾಗಿ ಜನರ ಮಧ್ಯೆ ಕೆಲಸ ಮಾಡಿದ ರಾಜಕೀಯ ಅನುಭವ ಹೊಂದಿದ್ದೇನೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.