ಕರಾವಳಿಯ ಕಾಂಗ್ರೆಸ್ ನಾಯಕರಿಂದ ಅಯೋಧ್ಯೆಯಲ್ಲಿ ರಾಮಸೇವೆಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ರಜತ ಕಲಶಾಭಿಷೇಕದ ಸೇವೆ ನೀಡಿ, ಆ ಪ್ರಯುಕ್ತ ನಡೆದ ಹೋಮ ಹವನಗಳಲ್ಲಿ ವಿಧಿಪೂರ್ವಕ ಸಂಕಲ್ಪ ನೆರವೇರಿಸಿದರು. ನಂತರ ರಾಮ ದೇವರಿಗೆ ಕಲಶಾಭಿಷೇಕ, ಮಂಗಳಾರತಿಯಲ್ಲಿಯೂ ಭಾಗವಹಿಸಿ, ಬಾಲರಾಮನಿಗೆ ಅಭಿಷೇಕ ಮಾಡಿದ ರಜತ ಕಲಶವನ್ನು ಶ್ರೀಗಳಿಂದ ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.