ಬರ ಪೀಡಿತ ಪ್ರದೇಶದಲ್ಲಿ ಆರ್ಥಿಕ ಬಲ ನೀಡುತ್ತಿದೆ ನರೇಗಾಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಒಟ್ಟು 35,430 ಕುಟುಂಬಗಳು ಉದ್ಯೋಗ ಚೀಟಿ ಹೊಂದಿದ್ದು, ಕಾರ್ಕಳ ತಾಲೂಕಿನಲ್ಲಿ 28,572, ಹೆಬ್ರಿ ತಾಲೂಕಿನಲ್ಲಿ 6,858 ಉದ್ಯೋಗ ಚೀಟಿ ಹೊಂದಿದ ಕುಟುಂಬಗಳಿವೆ. ಕಳೆದ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ನರೇಗಾ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.