ಕೊಲ್ಲೂರು ದೇವಸ್ಥಾನದ ಹಣ ಸರ್ಕಾರಕ್ಕೆ ಹೋಗಿಲ್ಲ: ಕೆ.ಬಾಬು ಶೆಟ್ಟಿ ಸ್ಪಷ್ಟನೆದೇವಸ್ಥಾನದ ಆದಾಯದಿಂದ ದೇವಳದ ದೈನಂದಿನ ಖರ್ಚು, ವಾರ್ಷಿಕ ಜಾತ್ರೆ, ಅಭಿವೃದ್ಧಿ ಕೆಲಸ, ಸಿಬ್ಬಂದಿ ವೆಚ್ಚ, ಭಕ್ತರಿಗೆ ಉಚಿತ ಅನ್ನಸಂತರ್ಪಣೆ, ಭಕ್ತರ ಮೂಲಸೌಕರ್ಯದ ಬಗ್ಗೆ, ಗೋಶಾಲೆ ನಿರ್ವಹಣೆ, ದೇವಸ್ಥಾನಕ್ಕೆ ಸೇರಿದ 5 ಪ್ರೌಢಶಾಲೆ ಮತ್ತು 1 ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಉಚಿತ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ, ಇತ್ಯಾದಿಗಳಿಗೆ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಹಾಗೂ ದೇವಸ್ಥಾನದ ಪರವಾಗಿ ಸ್ಪಷ್ಟನೆ ನೀಡಿದೆ.