ಜನಿವಾರಕ್ಕೆ ಹಿಜಾಬ್ ಹೋಲಿಕೆ: ವಿವಾದ ಸೃಷ್ಟಿಸಿದ ‘ಎಕ್ಸ್’ ಸಂದೇಶಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಅವರು ವಿದ್ಯಾರ್ಥಿಗಳ ಹಿಜಾಬ್ ತೆಗಿಸಿದ ಮತ್ತು ಜನಿವಾರ ತೆಗೆಸಿದ ನೋವು ಒಂದೇ ಅಲ್ಲವೇ, ಬ್ರಾಹ್ಮಣರಿಗೆ ಜನಿವಾರ ಎಷ್ಟು ಅಗತ್ಯವೋ ನಮಗೂ ಹಿಜಾಬ್ ಅಷ್ಟೇ ಅಗತ್ಯ, ಜನಿವಾರ ತೆಗೆದ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ, ಆದರೆ ಹಿಜಾಬಿಗಳನ್ನು ತಡೆದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ ಎಂದು ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.