ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ: ಮಿಶಲ್ ಕ್ವೀನಿ ಡಿಕೋಸ್ತಾಸಂತೆಕಟ್ಟೆ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗ, ಶಿಕ್ಷಣ ಮಾತ್ತು ಸಾಮಾಜಿಕ ಸಂಪರ್ಕ ಮಾಧ್ಯಮ ಆಯೋಗದ ಜಂಟಿ ಆಶ್ರಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 372ನೇ ರ್‍ಯಾಂಕ್ ಪಡೆದ ಉಡುಪಿಯ ಶ್ರೇಯಾನ್ಸ್ ಗೋಮ್ಸ್, ತಾವು ಪರೀಕ್ಷೆಗೆ ನಡೆಸಿದ ತಯಾರಿ, ಎದುರಿಸಿದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.