ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಿಂದ ಸಂಚಾರಿ ‘ದೃಷ್ಟಿ ಚಕ್ರ’ಕ್ಕೆ ಚಾಲನೆಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ, ಸಮುದಾಯ ವೈದ್ಯಕೀಯ ವಿಭಾಗಗಳ ವತಿಯಿಂದ, ಜನರಿದ್ದಲ್ಲಿ ತೆರಳಿ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಚಾರಿ ನೇತ್ರ ತಪಾಸಣಾ ಘಟಕ ‘ದೃಷ್ಟಿ ಚಕ್ರ’ಕ್ಕೆ ಚಾಲನೆ ನೀಡಲಾಯಿತು.