ಉತ್ತಮ ಸಂವಹನ ಕೌಶಲ ಮೈಗೂಡಿಸಿಕೊಳ್ಳಿ: ಪಯ್ಯವುಲ ಕೇಶವ ಕರೆಮಾಹೆಯ ಅಂಗಸಂಸ್ಥೆ ಟಿಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ನ ೩೯ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಶನಿವಾರ ಜರುಗಿತು. ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಸಚಿವರಾಗಿರುವ ಟ್ಯಾಪ್ಮಿಯ ಹಿರಿಯ ವಿದ್ಯಾರ್ಥಿ ಪಯ್ಯವುಲ ಕೇಶವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.