ಭಾರಿ ಗಾಳಿ, ಮಳೆಗೆ ಧರೆಗುರುಳಿದ ಮರಗಳು: ಅಡಕೆ ಕೃಷಿ ನಾಶಕಾರ್ಕಳ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರಿ ಸುಳಿ ಗಾಳಿ ಬೀಸಿದ್ದು ಭಾರಿ ಪ್ರಮಾಣದಲ್ಲಿ ಕೃಷಿ ನಾಶವಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್, ನಿಟ್ಟೆ , ಅತ್ತೂರು ಕಾಬೆಟ್ಟು ಪ್ರದೇಶಗಳಲ್ಲಿ ಮಳೆ ಬಿದ್ದಿದೆ. ಆದರೆ ಮಾಳ ಕೆರುವಾಶೆ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸಿದ್ದು ಅಡಕೆ ಗಿಡಗಳು ಧರೆಶಾಹಿಯಾಗಿವೆ.