ಕಲಾವಿದರಿಗೆ ಮುಡಿಪು: ಉಡುಪಿ ‘ಯಕ್ಷಗಾನ ಕಲಾರಂಗ’ಕ್ಕೆ ಸಾರ್ಥಕ ಸುವರ್ಣ ಸಂಭ್ರಮಪ್ರತೀ ವರ್ಷ ಮೇ ತಿಂಗಳ ಸಂಕ್ರಮಣದ ೧೦ ದಿನದ ಬಳಿಕ ಪತ್ತನಾಜೆ. ಯಕ್ಷಗಾನದ ತೆಂಕು ಮತ್ತು ಬಡಗು ಮೇಳಗಳು ಗೆಜ್ಜೆ ಬಿಡಿಸಿ ಒಳ ಸರಿಯುವ ದಿನ. ೧೯೭೫ನೇ ಇಸವಿಯ ಪತ್ತನಾಜೆಯ ದಿನ, ಮೇ ೨೪ರಂದು ಎರಡೂ ತಿಟ್ಟುಗಳ ಸಂಗಮ ಕ್ಷೇತ್ರವಾದ ಉಡುಪಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು ದೀಪ ಬೆಳಗಿಸಿ ಯಕ್ಷಗಾನ ಕಲಾರಂಗವನ್ನು ಉದ್ಘಾಟಿಸಿದರು.