ಕರಾವಳಿ ‘ಕೋಮು ಗಲಭೆ ಪೀಡಿತ’ ಬಿಂಬಿಸುವ ಪ್ರಯತ್ನ: ಸುನಿಲ್ ಕೆಆರ್ ಆರೋಪಕರಾವಳಿಯಲ್ಲಿ ಕೋಮುವಾದ ನಿಗ್ರಹ ವಿಶೇಷ ಪಡೆಯನ್ನು ಸರ್ಕಾರ ರಚಿಸಿ, ಅದನ್ನು ಹಿಂದುಗಳ ವಿರುದ್ಧ ಮಾತ್ರ ಬಳಸಲಾಗುತ್ತಿದೆ. ಗೋವು ಕಳ್ಳತನ, ಗೋಹತ್ಯೆ, ಲವ್ ಜಿಹಾದ್ ಗಳನ್ನು ಈ ಪಡೆಯ ಮೂಲಕ ತಡೆಯಿರಿ, ಆಗ ಕರಾವಳಿಯಲ್ಲಿ ಸೌಹಾರ್ದತೆ ತನ್ನಿಂತಾನೇ ಮೂಡುತ್ತದೆ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಸುನೀಲ್ ಕೆ.ಆರ್. ಹೇಳಿದ್ದಾರೆ.