ಉಡುಪಿ: ಜನತೆಯ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ದೃಷ್ಟಿ ಯೋಜನೆ ಜಾರಿಪ್ರತೀ ಠಾಣಾ ವ್ಯಾಪ್ತಿಯು ದೊಡ್ಡದಾಗಿದ್ದು, ಪ್ರತೀ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 80 ಸಾವಿರದಿಂದ 1 ಲಕ್ಷದ ವರೆಗೆ ಜನಸಂಖ್ಯೆ ಇದೆ. ಅಷ್ಟೂ ಜನಸಂಖ್ಯೆ ಇರುವ ಪ್ರದೇಶವನ್ನು ಕೇವಲ 40-60 ಜನ ಪೊಲೀಸರು ನಿರ್ವಹಿಸುತ್ತಿರುತ್ತಾರೆ. ಅಂದರೆ ಪ್ರತೀ ಪೊಲೀಸರಿಗೆ ಸುಮಾರು 1700 ರಿಂದ 1800 ಜನರ ಜವಾಬ್ದಾರಿಯು ಬರುತ್ತದೆ. ಈ ದೆಸೆಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತೀ ಬೀಟ್ನಲ್ಲಿ ಸುಮಾರು 80-100 ಮನೆಗಳ ಒಂದು ವೆಲ್ಫೇರ್ ಕಮಿಟಿಗಳನ್ನು ರಚಿಸಿ, ಅವರ ವ್ಯಾಪ್ತಿಯ ಮನೆಗಳಿಗೆ ರಕ್ಷಣೆಯನ್ನು ಕೊಡುವಂತೆ ಮಾಡಲಾಗಿದೆ.