ಭಗವದ್ಗೀತೆ ನಮ್ಮ ಬದುಕಿನ ತಳಪಾಯವಾಗಲಿಭಗವದ್ಗೀತೆಯು ಏಳು ಸಾವಿರ ವರ್ಷಗಳ ಹಿಂದೆ ರಚನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಭಗದ್ಗೀತೆಯ ಮೇಲೆ ನಿರಂತರ ಹೊಸ ಸಂಶೋಧನಾ ಆಧ್ಯಾತ್ಮಿಕ ಗ್ರಂಥಗಳು ಬರುತ್ತಿವೆ. ಭಗವದ್ಗೀತೆಯ ಅಡಕವಾಗಿರುವ ಪಾರಮಾರ್ಥಿಕ ಸತ್ಯದ ಬದುಕಿನ ಜ್ಞಾನದ ಸಂದೇಶಗಳು ತತ್ವಗಳಿಗೆ ಕೊನೆಯೆಂಬುದಿಲ್ಲ, ಅದೊಂದು ಚಿಂತನೆಯ ಧಾರೆಯಾಗಿದ್ದು, ಈ ಅಧ್ಯಾತ್ಮಿಕ ಸೆಲೆಯ ಧಾರೆಯು ಎಂದೂ ಬತ್ತುವುದಿಲ್ಲ