ವಿಜಯನಗರದ ರಾಜಕಾರಣದ ಚಿತ್ರಣ ಬದಲಿಸಿದ 2023!2023ರ ವಿಧಾನಸಭೆ ಚುನಾವಣೆ ವಿಜಯನಗರ ಜಿಲ್ಲೆಯ ರಾಜಕಾರಣವನ್ನು ಬದಲಿಸಿದೆ. ಜಿಲ್ಲೆಯಲ್ಲಿ ಘಟಾನುಘಟಿ ನಾಯಕರೇ ಪರಾಭವಗೊಂಡಿದ್ದಾರೆ. ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಜಿಲ್ಲೆಯ ರಾಜಕೀಯ ನಾಯಕರ ನಿರೀಕ್ಷೆಗೆ ತಕ್ಕಂತೆ ಬಾರದೇ, ಮತದಾರರ ಎಣಿಕೆಯಂತೆ ಚಿತ್ರಣ ಬದಲಾಗಿದೆ.