ಬಿಹಾರದ 13 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ₹1.1 ಕೋಟಿಗೆ ಬಿಕರಿಯಾದರು. ಈ ಮೂಲಕ ಐಪಿಎಲ್ಗೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿಯಲ್ಲಿ ವೈಟ್ವಾಶ್ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಆಸ್ಟ್ರೇಲಿಯಾ ವಿಮಾನವೇರಿದ್ದ ಟೀಂ ಇಂಡಿಯಾ, ಆಸೀಸ್ ನೆಲದಲ್ಲಿ ಕಮಾಲ್ ಮಾಡಿದೆ. ವೈಟ್ವಾಶ್ ಅವಮಾನ ಮರೆಸುವ ರೀತಿಯಲ್ಲಿ ಆಸ್ಟ್ರೇಲಿಯಾಕ್ಕೆ ಅವರದೇ ತವರಿನಲ್ಲಿ ಮಣ್ಣುಮುಕ್ಕಿಸಿದೆ.
ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 13 ಆಟಗಾರರು ವಿವಿಧ ತಂಡಗಳ ಪಾಲಾದರು. ರಾಜ್ಯದ ಆಟಗಾರರ ಪಟ್ಟಿ ಇಲ್ಲಿದೆ.
ಐಪಿಎಲ್ ಹರಾಜಿನ ಮೊದಲ ದಿನ ಸ್ಟಾರ್ ಆಟಗಾರರರನ್ನು ಕೊಂಡುಕೊಳ್ಳಲು ಫ್ರಾಂಚೈಸಿಗಳು ಭಾರಿ ಪೈಪೋಟಿಗಿಳಿದರೆ, 2ನೇ ದಿನ ವೇಗದ ಬೌಲರ್ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಎರಡೂ ದಿನ ಭಾರತೀಯ ಕ್ರಿಕೆಟಿಗರಿಗೆ ಫ್ರಾಂಚೈಸಿಗಳು ಹೆಚ್ಚಿನ ಮಣೆ ಹಾಕಿದ್ದು ಈ ಬಾರಿ ಹರಾಜಿನ ವಿಶೇಷ.
ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದ್ದು ಕೆಲ ಆಟಗಾರರು ಕೋಟಿ ಮೊತ್ತದಲ್ಲಿ ಬಿಕರಿಯಾಗಿದ್ದಾರೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇನ್ನು ಇದೇ ವೇಳೆ ಆರ್ಸಿಬಿ ತಂಡದ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ.