ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಶಾಸಕ ಮಂಜು ಅಸಮಾಧಾನ
Sep 27 2024, 01:34 AM ISTಬೆಟ್ಟದ ಬೈರವೇಶ್ವರ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಿಂದಿನ ಸಭೆಯಲ್ಲೆ ಹೇಳಿದ್ದೆ. ಇನ್ನೊಂದು ವಾರದಲ್ಲಿ ಕೆಲಸವಾಗಲಿದೆ ಎಂದು ಹೇಳಿಕೆ ನೀಡಿದ್ದಿರಿ. ಆರು ತಿಂಗಳಾದರೂ ಇನ್ನೂ ಕಥೆ ಹೇಳುತ್ತಿದ್ದೀರ. ಕೆಲಸ ಮಾಡುವ ಮನಸ್ಸಿದ್ದರೆ, ಕಾಮಗಾರಿ ನಡೆಸಲು ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದಿರಿ. ನಿಮಗೆ ಕೆಲಸ ಮಾಡುವ ಮನಸ್ಸೆ ಇಲ್ಲ. ಹೀಗಾದರೆ ಹೇಗೆ ಎಂದು ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್ ವಿರುದ್ಧ ಶಾಸಕ ಮಂಜು ಹರಿಹಾಯ್ದರು.