ಶಿಕಾರಿಪುರ ಪುರಸಭೆ: ₹16.55 ಕೋಟಿ ವೆಚ್ಚದ ಬಜೆಟ್ ಮಂಡನೆ
Mar 08 2024, 01:51 AM ISTಶಿಕಾರಿಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ 2024-25ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಯತೀಶ್ ಆರ್. ಮಂಡಿಸಿ ₹32,08590 ಉಳಿತಾಯ ಘೋಷಿಸಿದರು. ಬೀದಿದೀಪ ನಿರ್ವಹಣೆಗೆ ₹30 ಲಕ್ಷ, ನೈರ್ಮಲೀಕರಣ ನಿರ್ವಹಣೆಗೆ ₹11.5 ಲಕ್ಷ, ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗೆ ₹1.07 ಕೋಟಿ, ರಸ್ತೆ ನಿರ್ಮಾಣಕ್ಕೆ ₹35 ಲಕ್ಷ, ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ₹42 ಲಕ್ಷ ಎಂದು ವಿವರಿಸಿದ್ದಾರೆ.