ಖಾಲಿ ನಿವೇಶನ ಸ್ವಚ್ಛತೆ ನಿರ್ಲಕ್ಷಿಸಿದರೆ ದಂಡ: ಪುರಸಭೆ ಮುಖ್ಯಾಧಿಕಾರಿ ಎಚ್ಚರಿಕೆ
Jun 03 2024, 12:32 AM ISTಹೊನ್ನಾಳಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರು ಹಾಗೂ ಬಡಾವಣೆಯ ಮಾಲೀಕರು ತಮ್ಮ ಖಾಲಿ ನಿವೇಶನ ಹಾಗೂ ಬಡಾವಣೆಗಳಲ್ಲಿ ಕಳೆ ಗಿಡಗಳು, ಪೊದೆಗಳು ಬೆಳೆಯದಂತೆ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಆರೋಗ್ಯ ಸಂರಕ್ಷಣೆ, ಉತ್ತಮ ಪರಿಸರ ಸಂರಕ್ಷಣೆ ಹಿನ್ನೆಲೆ ಪುರಸಭೆ ವತಿಯಿಂದಲೇ ಸ್ವಚ್ಛಗೊಳಿಸಲಾಗುವುದು. ಆದರೆ, ಆಸ್ತಿ ಮಾಲೀಕರಿಂದ ನಿವೇಶನ ಸ್ವಚ್ಛತಾ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಪ್ರತಿ ಚದರ ಮೀಟರ್ಗೆ ₹20 ರಂತೆ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ನಿರಂಜನಿ ತಿಳಿಸಿದ್ದಾರೆ.