ಇಂದು ವ್ಯಸನ ಮುಕ್ತ ದಿನ; ಮಹಾಂತ ಮಂದಾರ ಪ್ರಶಸ್ತಿ ಪ್ರದಾನ
Aug 03 2024, 12:30 AM ISTಶರಣ ಸಂಸ್ಕೃತಿಯ ಹರಿಕಾರ, ಮಹಾಂತ ಜೋಳಿಗೆಯ ಶಿವಶಿಲ್ಪಿಗಳಾದ ಇಳಕಲ್ಲಿನ ಲಿಂ.ಮಹಾಂತಪ್ಪಗಳವರ ಜಯಂತಿ ಮಹೋತ್ಸವ ನಿಮಿತ್ತ ವ್ಯಸನ ಮುಕ್ತ ದಿನಾಚರಣೆ ಮತ್ತು ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾಲೂಕಿನ ವಿಮೋಚನ ಶಿಕ್ಷಣ ಸಂಘವು ಆ.3 ರಂದು ಬೆಳಗ್ಗೆ 10.30 ಗಂಟೆಗೆ ಮಲಾಬಾದನ ವಿಮೋಚನಾ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ವಿಮೋಚನಾ ಸಂಸ್ಥೆಯ ಅಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಹೇಳಿದರು.