ಗಣಪತಿ ಬಪ್ಪ ಮೋರಿಯಾ!1ಮಹಾರಾಷ್ಟ್ರ ರಾಜ್ಯದ ಪ್ರತಿ ಪ್ರದೇಶದ ಗಣೇಶೋತ್ಸವಕ್ಕೂ ತನ್ನದೇ ಆದ ಸೊಬಗಿದೆ. ಭವ್ಯತೆಯಿದೆ, ಇತಿಹಾಸವಿದೆ, ಪರಂಪರೆಯಿದೆ. ಇದರ ಪರಿಚಯವನ್ನು ಇಡೀ ಜಗತ್ತಿಗೆ ಮಾಡಿಕೊಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಸೆಪ್ಟಂಬರ್ 18 ರಿಂದ 28ರವರೆಗೂ ಮಹಾರಾಷ್ಟ್ರದ ಚಾರಿತ್ರಿಕ ನಗರಗಳಾದ ಪುಣೆ, ರತ್ನಗಿರಿ ಹಾಗೂ ಪಾಲ್ಗಾರ್ನ ಗಣೇಶೋತ್ಸವದ ಸಂಭ್ರಮವನ್ನು ಜಗತ್ತಿನ ಗಮನಕ್ಕೆ ತರಲು ‘ಅಂತಾರಾಷ್ಟ್ರೀಯ ಗಣೇಶ ಉತ್ಸವ 2023’ ಆಯೋಜಿಸಿತ್ತು.