ಎಲ್ ನಿನೋ ಮುಕ್ತಾಯದತ್ತ, ಲಾನಿನೋ ಸಾಧ್ಯತೆ ದಟ್ಟಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ದಾಖಲೆ ಪ್ರಮಾಣದ ಉಷ್ಣ ಮಾರುತಕ್ಕೆ ಕಾರಣವಾಗಿದ್ದ ‘ಎಲ್ ನಿನೋ’ ಹವಾಮಾನ ಮುಕ್ತಾಯದತ್ತ ಸಾಗಿದ್ದು, ಉತ್ತಮ ಮುಂಗಾರು ಮಳೆಗೆ ಪೂರಕವಾಗಬಲ್ಲ ಲಾ ನಿನೋ ಜುಲೈ- ಸೆಪ್ಟೆಂಬರ್ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ವ ಹವಾಮಾನ ಇಲಾಖೆ ಹೇಳಿದೆ.