ಮದ್ವೆಗೆ ವಿರೋಧಿಸ್ತಾರೆಂದು ಹೆದರಿ ಪ್ರೇಮಿಗಳ ಆತ್ಮಹತ್ಯೆಪ್ರೀತಿಗೆ ವಿರೋಧ ಹಾಗೂ ಮುಂದೆ ನಮ್ಮಿಬ್ಬರ ಮದುವೆಗೂ ಕುಟುಂಬದವರು, ಸಮಾಜ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೆದರಿ, ಜಿಗುಪ್ಸೆಗೊಂಡು ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾಂವ ಗ್ರಾಮದದಲ್ಲಿ ಶುಕ್ರವಾರ ನಡೆದಿದೆ. ನಂದಗಾಂವದ ಸಚಿನ್ ಭೀರಪ್ಪ ದಳವಾಯಿ (22) ಹಾಗೂ ಅದೇ ಗ್ರಾಮದ ಪ್ರತಿಭಾ ಮಲ್ಲಪ್ಪ ಮಡಿವಾಳ (19) ನೇಣಿಗೆ ಶರಣಾದದವರು.