ಪ್ರವಾಹಕ್ಕೆ ಬೀದಿ ಪಾಲಾದ ಬದುಕು!ಕೃಷ್ಣಾ ನದಿಯ ಪ್ರವಾಹದ ಹೊಡೆತಕ್ಕೆ ತಾಲೂಕಿನ 23 ಗ್ರಾಮಗಳು ಇದೀಗ ತುತ್ತಾಗಿವೆ. ಆದರೆ, ವಾಸಿಸಲು ಮನೆ, ಉಣ್ಣಲು ಅನ್ನ, ಕುಡಿಯಲು ನೀರು ಇಲ್ಲದೇ ತಮ್ಮ ಜಾನುವಾರುಗಳ ಜೊತೆ ಸಂಬಂಧಿಕರ ಮನೆ, ಕಾಳಜಿ ಕೇಂದ್ರ ಆಸರೆ ಪಡೆದುಕೊಂಡಿದ್ದಾರೆ. ಈ ಮೂಲಕ ನೆರೆ 23 ಗ್ರಾಮಗಳ ಜನರನ್ನು ಪರದೇಶಿಯನ್ನಾಗಿಸಿದೆ.