ಬರಗಾಲಪೀಡಿತ ಪ್ರದಶದ ರೈತರಲ್ಲಿ ಹರ್ಷ ಮೂಡಿಸಿದ ಮಳೆಕಡೂರುಕಳೆದ ಒಂದು ವಾರದಿಂದಲೂ ಕಡೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಬಿಡದಂತೆ ಸುರಿಯುತ್ತಿದೆ. ತಾಲೂಕಿನ ಅನೇಕ ಕಡೆ ನಿರಂತರ ಮಳೆ ಬರುವ ಜೊತೆ ತಾಲೂಕಿನ ಎಮ್ಮೇ ದೊಡ್ಡಿ ಭಾಗ ಮತ್ತು ಸುತ್ತಮುತ್ತಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಬರಗಾಲ ಪೀಡಿತ ಕಡೂರು ತಾಲೂಕಿನ ಪ್ರದೇಶಗಳಾದ ಸಿಂಗಟಗೆರೆ, ಪಂಚನಹಳ್ಳಿ ಹೋಬಳಿಗಳಲ್ಲಿ ಮಳೆಯಿಲ್ಲದೆ ರಾಗಿ ಬೆಳೆ ಸೊರಗಿತ್ತು. ಅಗತ್ಯವಾಗಿದ್ದ ಮಳೆ ಬಂದಿರುವ ಕಾರಣ ಹಾನಿಯ ಪ್ರಮಾಣ ಕಡಿಮೆಯಾಗಿ ಮಳೆಯಿಂದ ಬಯಲು ಪ್ರದೇಶದ ಪ್ರಮುಖ ಬೆಳೆಯಾದ ರಾಗಿಗೆ ಜೀವಜಲ ದೊರೆತು ನಳನಳಿಸುತ್ತಿದೆ.