ಮಳೆಯ ಚೆಲ್ಲಾಟ: ಅಡಕೆ ಬೆಳೆಗಾರರಿಗೆ ಸಂಕಷ್ಟ ಚಿಕ್ಕಮಗಳೂರು, ವರುಣನ ಆರ್ಭಟಕ್ಕೆ ಜಿಲ್ಲೆ ತತ್ತರಿಸಿ ಹೋಗಿದೆ. ಬಯಲುಸೀಮೆಯ ರೈತರು ಈರುಳ್ಳಿ, ತರಕಾರಿ ಫಸಲು ಕಳೆದುಕೊಂಡಿದ್ದರೆ, ಮಲೆನಾಡಿನ ರೈತರು ಕೊಳೆ ರೋಗದಿಂದ ತಮ್ಮ ಅಡಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಕಾಫಿ, ಮೆಣಸು, ಏಲಕ್ಕಿ ಫಸಲಿಗೂ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳಲಿದೆ.