ಶೃಂಗೇರಿ ತಾಲೂಕಲ್ಲಿ ಅಡಕೆಗೆ ಹರಡುತ್ತಿದೆ ಎಲೆಚುಕ್ಕಿ ರೋಗ: ರೈತ ತತ್ತರಅಡಕೆ ಮಲೆನಾಡಿನ ವಾಣಿಜ್ಯ ಹಾಗೂ ಜೀವನಾದಾರ ಬೆಳೆಯಾಗಿದೆ. ಈ ಭಾಗದಲ್ಲಿ ಬೆಳೆಗಾರರು ತಲತಲಾಂತರ ದಿಂದ ಪಾರಂಪರಿಕವಾಗಿ ಅಡಕೆ ಬೆಳೆ ಬೆಳೆಯುತ್ತ ಬಂದಿದ್ದಾರೆ. ಆದರೀಗ ಅಡಕೆಗೆ ಎಲೆಚುಕ್ಕಿ ರೋಗ ತಗುಲಿ ಮಲೆನಾಡಿನ ಬಹುತೇಕ ತೋಟಗಳು ವಿನಾಶದ ಅಂಟಿಗೆ ತಲುಪುತ್ತಿವೆ, ಇತ್ತ ಫಸಲು ಇಲ್ಲ. ಅತ್ತ ತೋಟವೂ ಇಲ್ಲ.ಅಡಕೆ ಬೆಳೆಗಾರರ ಬದುಕು ಆತಂತ್ರವಾಗಿ, ಸಂಕಷ್ಟದಲ್ಲಿದೆ.