ಕೇತೆ ದೇವರ ಜಾತ್ರೆಗೆ ಅದ್ಧೂರಿ ತೆರೆಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಬುಡಕಟ್ಟು ಯಾದವ ಸಮುದಾಯದ ಆರಾಧ್ಯದೈವ ಕೇತೆ ದೇವರ ಜಾತ್ರೆ ಸಂಭ್ರಮ ಸಡಗರಗಳಿಂದ ಸೋಮವಾರ ನಡೆಯಿತು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಕೇತೆದೇವರ ಕೃಪೆಗೆ ಪಾತ್ರರಾದರು. ತಾಲೂಕಿನ ಪರಶುರಾಮಪುರ ಹೋಬಳಿ ಪರ್ಲಹಳ್ಳಿ ಗ್ರಾಮದಲ್ಲಿ ಪರ್ಲಹಳ್ಳಿ ಗ್ರಾಮದ ವಸಲುದಿನ್ನೆಯಲ್ಲಿ ಕಳೆದ 12 ದಿನಗಳಿಂದ ಈ ಜಾತ್ರೆ ನಡೆಯುತ್ತಿದ್ದು, ಮುಳ್ಳಿನಿಂದ ನಿರ್ಮಿಸಲಾದ ಗುಡಿಯ ಮೇಲೆ ಸ್ಥಾಪಿಸಿದ ಕಳಸವನ್ನು ಇಳಿಸುವ ಮೂಲಕ ಜಾತ್ರೆಗೆ ತೆರೆಬಿದ್ದಿತು.