ಸಂಘಟಕರ ನಿರೀಕ್ಷೆ ಹುಸಿಯಾಗಿಸಿದ ಶೋಷಿತರ ಜಾಗೃತಿ ಸಮಾವೇಶಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶ ಸಂಘಟಕರ ನಿರೀಕ್ಷೆಗಳ ಹುಸಿಯಾಗಿಸಿತ್ತು. ಐದು ಲಕ್ಷ ಮಂದಿ ಜಮಾವಣೆಗೊಳ್ಳುವರೆಂಬ ಅಂದಾಜು ಒಂದುವರೆ ಲಕ್ಷ ದಾಟಲಿಲ್ಲ. ಕಳೆದ ಒಂದು ತಿಂಗಳಿಂದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಹೆಸರಲ್ಲಿ ಸಮಾವೇಶ ಸಂಘಟಿಸಲಾಗಿತ್ತಾದರೂ ನೋಡುಗರಿಗೆ ಕಾಂಗ್ರೆಸ್ ಸಮಾವೇಶದಂತೆ ಕಂಡು ಬಂತು.