ಡೆಂಘೀ ತಡೆಗೆ ಸ್ವಚ್ಛತೆ, ಫಾಗಿಂಗ್ ನಡೆಸಿ: ಶಾಸಕ ಬಸವರಾಜುಡೆಂಘೀಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಹಿಡಿದಿಟ್ಟುಕೊಳ್ಳಲು ಪುರಸಭೆಯವರು ಪ್ರತಿದಿನ ಪಟ್ಟಣದ ಸ್ವಚ್ಛತೆ, ಚರಂಡಿಗಳ ಸ್ವಚ್ಛತೆ, ಮನೆಗಳಿಂದ ಕಸ ಸಂಗ್ರಹ ಸೇರಿದಂತೆ ಫಾಗಿಂಗ್ ಮಾಡಬೇಕು. ಆ ಮೂಲಕ ಡೆಂಘೀಜ್ವರ ಹರಡದಂತೆ ನಿಯಂತ್ರಿಸಬೇಕು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಪುರಸಭೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.