ಬೀದಿಬದಿ ಗೋಬಿ, ಪಾನಿಪುರಿಯಿಂದ ದೂರವಿರಿಮನೆಯಲ್ಲಿ ಎಲ್ಲರೂ ಆಹಾರದಲ್ಲಿ ಪಾಲಕ್, ಮೆಂತ್ಯೆ, ಸೌತೆ, ಮೂಲಂಗಿ, ನುಗ್ಗೆ ಹಾಗೂ ಇತರೆ ತರಕಾರಿ, ಸೊಪ್ಪು, ಕಾಳು, ಕಡಿ, ಹಣ್ಣುಗಳನ್ನು ಹೆಚ್ಚು ಬಳಸಬೇಕು. ಇದರಿಂದ ಮನುಷ್ಯನಿಗೆ ಬರುವ ಕಾಯಿಲೆಗಳ ಪೈಕಿ ಅರ್ಧದಷ್ಟು ದೂರವಾಗುತ್ತವೆ ಎಂದು ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಕಾವ್ಯ ಹರಿಹರದಲ್ಲಿ ಹೇಳಿದ್ದಾರೆ.