ಆಂಗ್ಲಭಾಷಾ ಶಿಕ್ಷಣದ ವ್ಯಾಮೋಹದಿಂದ ಹೊರಬನ್ನಿ: ಸಭಾಪತಿ ಬಸವರಾಜ ಹೊರಟ್ಟಿಪೋಷಕರ ಆಂಗ್ಲಭಾಷಾ ಶಿಕ್ಷಣದ ವ್ಯಾಮೋಹದಿಂದ ಪ್ರಸ್ತುತ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪಿವೆ. ಆದರೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಇಂದು ಉನ್ನತ ಹುದ್ದೆ, ಸ್ಥಾನಮಾನ ಗಳಿಸಿದ್ದಾರೆ.