ಹಾಸನದಲ್ಲಿ ನಿವೃತ್ತ ಯೋಧ ಜಗದೀಶ್‌ಗೆ ಅದ್ಧೂರಿ ಸ್ವಾಗತ, ಮೆರವಣಿಗೆಯೋಧ ಟಿ.ಜಿ. ಜಗದೀಶ್ ಅರಸೀಕೆರೆ ರಸ್ತೆ ಬಿ. ಕಾಟೀಹಳ್ಳಿ ನಿವಾಸಿಯಾಗಿದ್ದು, ನಿವೃತ್ತರಾಗಿ ತಮ್ಮ ತವರಿಗೆ ಮರಳಿದ ಯೋಧನಿಗೆ ಹಾಸನ ನಗರದ ಡೈರಿ ವೃತ್ತದಲ್ಲಿ ಅದ್ಧೂರಿ ಸ್ವಾಗತ ನೀಡಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ, ಪೇಟ ತೊಡಿಸಿ ಬರಮಾಡಿಕೊಳ್ಳಲಾಯಿತು. ನಂತರ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.