ಜಗಜೀವನ ರಾಂರ ಗುಣಗಳು ಅನುಕರಣೀಯ: ತಹಸೀಲ್ದಾರ್ ರುಕಿಯಾ ಬೇಗಂಡಾ.ಬಾಬು ಜಗಜೀವನ ರಾಂ ಹಸಿರು ಕ್ರಾಂತಿಯ ಹರಿಕಾರ, ದಲಿತರ ಮೇಲಿನ ದೌರ್ಜನ್ಯ ತಡೆಯಲು ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಅವರ ಮೌಲ್ಯಧಾರಿತ ಜೀವನ ಶೈಲಿ, ಅವರ ಆದರ್ಶ ಗುಣಗಳು ಇತರರಿಗೂ ಅನುಕರಣೀಯವಾಗಿದೆ ಎಂದು ತಹಸೀಲ್ದಾರ್ ರುಕಿಯಾ ಬೇಗಂ ಅಭಿಪ್ರಾಯಪಟ್ಟರು. ಅರಸೀಕೆರೆಯಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.