ಇನ್ನೊಂದು ಭಾಷೆ ದ್ವೇಷಿಸಿ ಕನ್ನಡ ಬೆಳೆಯಲು ಸಾಧ್ಯವಿಲ್ಲ : ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ಕನ್ನಡ ಭಾಷೆ, ಸಂಸ್ಕೃತಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಪಸರಿಸಿದೆ. ಅನೇಕ ಕನ್ನಡ ಪರ ಸಂಘಟನೆಗಳು ಕನ್ನಡಕ್ಕಾಗಿ ದುಡಿಯುತ್ತಿವೆ. ಕನ್ನಡವನ್ನು ಹೊರರಾಜ್ಯ, ಹೊರ ದೇಶಗಳಲ್ಲಿ ಕಟ್ಟಿ ಬೆಳೆಸುವಂತಹ ಕೆಲಸದಲ್ಲಿಅವು ತೊಡಗಿದ್ದು, ಅವುಗಳಿಗೆ ಬೇಕಾದ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ.