ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ: ಡಾ.ಅನಿಲ್ಯಾವುದೇ ಸಮಸ್ಯೆ, ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಅಂತಿಮ ಪರಿಹಾರವಲ್ಲ. ವ್ಯಕ್ತಿತ್ವದ ನ್ಯೂನತೆ, ಖಿನ್ನತೆ, ಕೀಳರಿಮೆ, ಮಾದಕ ವ್ಯಸನಗಳು, ಸಂಬಂಧಗಳಲ್ಲಾಗುವ ಬಿರುಕುಗಳು, ಭಾವಾತಿರೇಕಗಳು, ದುಡುಕು, ಕೋಪ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಆತ್ಮಹತ್ಯೆಗೆ ಪ್ರಯತ್ನಿಸುವವರಿಗೂ ಸಾಯುವ ಬಯಕೆ ಇರುವುದಿಲ್ಲ.