ಹೊಳಲು ಗ್ರಾಮದಲ್ಲಿ ಶ್ರೀರಾಮನವಮಿ ಆಚರಣೆಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀಆಂಜನೇಯ ಸರ್ಕಲ್, ಎಚ್.ಎಂ.ನಾಯಕರ ಸರ್ಕಲ್ ಹಾಗೂ ಶ್ರೀಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಆಂಜನೇಯ ಭಕ್ತ ಸಮಿತಿಯಿಂದ ಶ್ರೀರಾಮನವಮಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಅಪ್ಪುವಿನ ಭಾವಚಿತ್ರಕ್ಕೂ ಸಹ ಪೂಜೆ ಮಾಡಿ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.