ಗ್ಯಾರಂಟಿಗಳ ಸುತ್ತ ಕಾಂಗ್ರೆಸ್ ಗಿರಕಿ: ದೀಪಕ್ಅನುದಾನ ಕೊರತೆಯಿಂದ ಪರ್ಸೆಂಟೇಜ್ ಸಿಗದೆ ಪರದಾಡುತ್ತಿರುವ ಶಾಸಕರು ನೇರವಾಗಿ ಜನರೆದುರು ಸುಲಿಗೆಗೆ ಇಳಿದಿದ್ದಾರೆ. ಪೊಲೀಸ್, ಆರ್ ಇಒ, ಸಬ್ರಿಜಿಸ್ಟ್ರಾರ್, ತಾಲೂಕು ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಕ್ರಮ ಮರಳು ಗಣಿಗಾರಿಕೆ, ಕ್ರಷರ್ಗಳಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗದೆ ನಾಡಿನ ಸಂಪತ್ತನ್ನು ನಿರಂತರವಾಗಿ ಲೂಟಿ ಹೊಡೆಯಲು ಬಿಡಲಾಗಿದೆ.