ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿ ವಿದ್ಯಾರ್ಥಿಗಳಿಗೆ ನಿವೃತ್ತ ಬಿಇಒ ಕರೆಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ಕಲಿತು, ಉತ್ತಮವಾಗಿ ಓದುವ, ಬರೆಯವ ಹಾಗೂ ಅರ್ಥಮಾಡಿಕೊಳ್ಳುವ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡ ಅರ್ಥಪೂರ್ಣ ಪದ ರಚನೆ, ವಾಕ್ಯ ರಚನೆ ಉತ್ತಮ ಮಾತುಗಾರಿಕೆ ಕಲಿತುಕೊಳ್ಳಬೇಕು. ಕನ್ನಡವನ್ನು ಕಲಿತು ಚುಟುಕು, ಪ್ರಾಸ ಪದಗಳು ಕಥೆಗಳನ್ನು ಬರೆಯುವ ಹವ್ಯಾಸವನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಬೇಕು.