ರಸ್ತೆ ಅಕ್ರಮವಾಗಿ ಒತ್ತುವರಿ ತೆರವುಗೊಳಿಸಲು ತಾಲೂಕು ಆಡಳಿತ ನಿರ್ಲಕ್ಷ್ಯಕಿರುಗಾವಲು ಹೋಬಳಿ ಉಪ್ಪಲಗೇರಿ ಕೊಪ್ಪಲು ಹಾಗೂ ಮಲಿಯೂರು ಗ್ರಾಮದ ಸರ್ವೆ ನಂ.83, 84, 85, 86, 38, 39 ಜಮೀನುಗಳು ಸೇರಿದಂತೆ ಪರಿಶಿಷ್ಟ ಜಾತಿ ಸಮುದಾಯದ ಬೀದಿಗೆ ಹೊಂದಿಕೊಂಡಂತೆ ಸರ್ಕಾರಿ ರಸ್ತೆ ಇದ್ದರೂ ಕೂಡ ವ್ಯಕ್ತಿಯೊಬ್ಬ ಅಕ್ರಮವಾಗಿ ರಸ್ತೆಯನ್ನು ಅಕ್ರಮಿಸಿಕೊಂಡಿರುವ ಪರಿಣಾಮ ನಿತ್ಯ ರೈತರು ಹೊಲಗದ್ದೆಗಳಿಗೆ ಎತ್ತಿನಗಾಡಿ , ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಸಂಚರಿಸಲು ಹರಸಾಹಸ ಪಡುವಂತಾಗಿದೆ.