ಕೆಂಪೇಗೌಡರ ಯೋಜನೆಗಳಿಂದ ಜನರಿಗೆ ಬಹಳಷ್ಟು ಅನುಕೂಲ: ತಹಸೀಲ್ದಾರ್ ನಯೀಂಉನ್ನೀಸಾಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಾಧನೆ ಮತ್ತು ದೂರದೃಷ್ಟಿಯನ್ನು ಮರೆಯಲು ಸಾಧ್ಯವಿಲ್ಲ. ಅಂದಿನ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ರಾಜ್ಯದ ರಾಜಧಾನಿಯಾಗಲು ಸಾಧ್ಯವಾಯಿತು. ನಾಡಪ್ರಭು ಕೆಂಪೇಗೌಡರ ಹಾಕಿಕೊಟ್ಟಿರುವ ಅಡಿಪಾಯಗಳು, ಕೈಗೊಂಡಿದ್ದ ಯೋಜನೆಗಳಿಂದ ನಾಡಿನ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ.