ಕೆಂಪೇಗೌಡರು ನಾಡಪ್ರಭು ಎಂಬ ಕೀರ್ತಿಗೆ ನಿಜವಾದ ಭಾಷ್ಯ ಬರೆದವರು: ಎಸ್.ದೊರೆಸ್ವಾಮಿಕೆಂಪೇಗೌಡರು ಎಲ್ಲ ಜನಾಂಗದ ಜಾತ್ಯತೀತ ಶಕ್ತಿ. ರಾಜಪ್ರ ಭುತ್ವದಲ್ಲಿ ಹಲವು ಅನಿಷ್ಟ ಪದ್ಧತಿ ವಿರೋಧಿಸಿದರು. ಜನಕಲ್ಯಾಣಕ್ಕಾಗಿ ವೃತ್ತಿ, ಕಸುಬು ಆಧಾರಿತವಾಗಿ ಹಲವು ಪೇಟೆ ನಿರ್ಮಿಸಿದರು. ಅಂದು ನಿರ್ಮಿಸಿದ ಕೆರೆ, ರಾಜಕಾಲುವೆಗಳು ದುರಾಸೆಯಿಂದ ಮುಚ್ಚಿವೆ. ಇಂದು ಕೊಳವೆಬಾವಿ ಆರ್ಭಟಕ್ಕೆ ಮಳೆಗಾಲವೂ ಭೀಕರ ಬರಗಾಲವಾಗುವಂತಾಗಿದೆ. ರಾಜಕಾಲುವೆ ಮುಚ್ಚಿದ ಪರಿಣಾಮ ಜಲಪ್ರಳಯ ಬೆಂಗಳೂರಿನಲ್ಲಿ ಸಾಮಾನ್ಯವಾಗಿದೆ.