ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು: ಆರೋಗ್ಯಾಧಿಕಾರಿ ಸಿ.ಎ.ಅರವಿಂದ್ಆರೋಗ್ಯ ವೇ ಭಾಗ್ಯ. ಮನುಷ್ಯ ದುಡಿಮೆಯೊಂದಿಗೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು. ನಮ್ಮ ದೈನಂದಿನ ಆಹಾರ, ವಿಹಾರ, ಅಭ್ಯಾಸ, ಹವ್ಯಾಸಗಳೇ ನಮ್ಮ ಆರೋಗ್ಯದ ಗುಟ್ಟು ಶಿಸ್ತಿನ ಜೀವನದಿಂದ ಆರೋಗ್ಯವನ್ನು ಕಾಪಾಡಬಹುದು. ಥೈರಾಯಿಡ್ ಸಮಸ್ಯೆ, ಪಿಸಿಓಡಿ ಸಮಸ್ಯೆ, ಗರ್ಭಕೋಶ, ಸ್ತನ ಕ್ಯಾನ್ಸರ್ ಬಗ್ಗೆ ಸೂಕ್ತ ಸಮಯದಲ್ಲಿ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ಪಡೆಯಬೇಕು.