ಮುಂಗಾರು ಕ್ಷೀಣ: ಕೆಆರ್‌ಎಸ್ ನೀರಿನ ಮಟ್ಟ ಗೌಣ..!ಕಳೆದ ವರ್ಷ ಎದುರಾದ ಬರಗಾಲ, ಬೇಸಿಗೆ ಬೆಳೆಗಳಿಗೆ ನೀರು ಹರಿಸದಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ನಾಲೆಗಳಿಗೆ ನೀರು ಹರಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ನೂರರ ಗಡಿ ದಾಟಿದರೆ ನಾಲೆಗಳಿಗೆ ನೀರು ಹರಿಸಿ ರೈತರನ್ನು ಸಮಾಧಾನಪಡಿಸಬಹುದೆಂಬ ನಿರೀಕ್ಷೆಯಲ್ಲಿ ಸರ್ಕಾರ ಇತ್ತು. ಆದರೆ, ಕಾವೇರಿ ಕಣಿವೆ ಪ್ರದೇಶದಲ್ಲಿ ನಿರೀಕ್ಷೆಯಂತೆ ಮಳೆಯಾಗದೆ ನಾಲ್ಕೂ ಜಲಾಶಯಗಳ ಒಳಹರಿವು ನೀರಸವೆನಿಸುವಂತಿದೆ.