ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ , ಜಾಮಿಟ್ರಿ ಬಾಕ್ಸ್, ಡಿಕ್ಷನರಿ ವಿತರಣೆಹಲಗೂರಿನಲ್ಲಿ ಹುಟ್ಟಿ ಬೆಂಗಳೂರಿನ ಜಿಕೆವಿಕೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಗೊಂಡ ಮಂಚೇಗೌಡರು ಸ್ಥಾಪಿಸಿದ ಹಲಗೂರು ನಾಗರಿಕರ ಹಿತರಕ್ಷಣ ಟ್ರಸ್ಟ್‌ನಿಂದ ಹೋಬಳಿ ಎಲ್ಲಾ ಶಾಲಾ ಮಕ್ಕಳಿಗೆ ಅಗತ್ಯವುಳ್ಳ ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಡಿಕ್ಷನರಿ, ಗಡಿಯಾರ, ಬಿಸಿಯೂಟಕ್ಕೆ ಲೋಟ, ತಟ್ಟೆಗಳನ್ನು 29 ವರ್ಷಗಳಿಂದ ನೀಡಲಾಗುತ್ತಿದೆ.